ಯಲಹಂಕ ರೈಲ್ವೆ ನಿಲ್ದಾಣದಲ್ಲಿ ‘ಮರಿ ಟೈಗರ್ ಚಿತ್ರದ ಚಿತ್ರೀಕರಣ
Posted date: 21 Wed, Sep 2016 – 07:17:59 PM

ವಿನೋದ್ ಪ್ರಭಾಕರ್ ನಟನೆಯ ‘ಮರಿ ಟೈಗರ್ ಚಿತ್ರಕ್ಕೆ ಯಲಹಂಕ ರೈಲ್ವೆ ನಿಲ್ದಾಣದಲ್ಲಿ ಸುಮಾರು ಹದಿನೈದು ದಿನಗಳ ಚಿತ್ರೀಕರಣ ನಡೆದಿದೆ. ರೈಲ್ವೆ ಭೋಗಿ ಹಾಗೂ ನಿಲ್ದಾಣದ ಸುತ್ತಮುತ್ತ ಸಾಹಸ ಸನ್ನಿವೇಶ, ಪ್ರೀತಿಯ ಸನ್ನಿವೇಶಗಳ ಚಿತ್ರೀಕರಣ ನಡೆದಿದೆ. ವಿನೋದ್ ಪ್ರಭಾಕರ್, ತೇಜು, ಪೆಟ್ರೋಲ್ ಪ್ರಸನ್ನ, ಮಾ||ಋತಿಕ್, ಕಾಟ್‌ರಾಜ, ಮನೋಜ್ ಭರತ್, ಬುಲೆಟ್ ಪ್ರಕಾಶ್ ಹಾಗೂ  ಸುಮಾರು ೨೫ಕ್ಕೂ ಹೆ಼ಚ್ಚು ಸಾಹಸ ಕಲಾವಿದರು  ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಐದು ಕ್ಯಾಮೆರಾಗಳನ್ನು ಬಳಸಿ ಈ ಚಿತ್ರೀಕರಣ ನಡೆಸಿರುವುದು ವಿಶೇಷ. ಒಂದು ವಾರದ ಚಿತ್ರೀಕರಣ ಬಾಕಿಯಿದ್ದು ನವಂಬರ್‌ನಲ್ಲಿ ಚಿತ್ರೀಕರಣ ನಡೆಯಲಿದೆ.
ನಂದ ಲವ್ಸ್ ನಂದಿತಾ, ಭಾಗ್ಯದ ಬಳೆಗಾರ ಚಿತ್ರಗಳನ್ನು ರಮೇಶ್ ಕಷ್ಯಪ್ ನಿರ್ಮಾಪಕರಾಗಿರುವ ಈ ಚಿತ್ರವನ್ನು ಪಿ.ಎನ್ ಸತ್ಯ ನಿರ್ದೇಶಿಸುತ್ತಿದ್ದಾರೆ.  
ವಿನೋದ್ ಪ್ರಭಾಕರ್ ವೃತ್ತಿ ಜೀವನಕ್ಕೆ ಮಹತ್ವದ ತಿರುವು ನೀಡಲಿದೆ ಎಂಬ ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರಕ್ಕೆ ‘ಚಿಂಗಾರಿ’ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಎರಡನೇ ನಾಯಕಿಯಾಗಿದ್ದ ತೇಜು ನಾಯಕಿಯಾಗಿದ್ದಾರೆ.  ಅಜಯ್ ಕುಮಾರ್ ಕಥೆ ಬರೆದಿರುವ ಈ ಚಿತ್ರಕ್ಕೆ ಮಲೇಷಿಯಾದ ರಾಕ್ ರವಿ ಸಂಗೀತ ನಿರ್ದೇಶನ ಮತ್ತು ಜೈ ಆನಂದ್ ಛಾಯಾಗ್ರಹಣ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed